

ಕಾಲೇಜಿನ ಶಾಂತಿ ಭವನದಲ್ಲಿ ನಡೆದ ಶಾಂತಿ ಪದವಿ ಕಾಲೇಜು ಸಮಾಜಶಾಸ್ತ್ರ ವಿಭಾಗ ಮಟ್ಟದ ವಿಚಾರ ಸಂಕಿರಣವನ್ನು ಕಾಲೇಜು ಸಮಾಜಶಾಸ್ತ್ರ ವಿಧ್ಯಾರ್ಥಿಗಳ ಸಂಘದ ವತಿಯಿಂದ ದಿನಾಂಕ:27-10-2009ರಂದು ಶಾಂತಿ ಭವನದಲ್ಲಿ ನಡೆಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜಕಲ್ಯಾಣಾಧಿಕಾರಿಗಳು, ಜಿಲ್ಲಾ ಕಾರಾಗೃಹ ಆಧಿಕಾರಿಗಳು ಭಾಗವಹಿಸಿದರು. ಸಭೆಯ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲರು ಎಂ.ಸಿ.ವೀರಭದ್ರಸ್ವಾಮಿಯವರು ವಹಿಸಿದ್ದರು. ಈ ವಿಚಾರ ಸಂಕಿರಣದಲ್ಲಿ ಕಾಲೇಜಿನ ಕಾರ್ಯದರ್ಶಿಗಳು ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಇತರ ಭೋಧಕ ಸಿಬ್ಬಂದಿ ಮತ್ತು ಭೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ಸಂಪಾದಕೀಯ.,
ಗಿರೀಶ್ ಗೌಡ