
ಮೈಸೂರು-ಸಂಕ್ಷಿಪ್ತ ಇತಿಹಾಸ:
ದಂತಕಥೆಯ ಪ್ರಕಾರ ದುರ್ಗಾ ದೇವಿಯಿಂದ ದಮನಮಾಡಲ್ಪಟ್ಟ ಮಹಿಷಾಸುರನೆಂಬ ರಾಕ್ಷಸನಿಂದ ಮೈಸೂರಿಗೆ ಈ ಹೆಸರು ಬಂದಿದೆ ಎಂದು ನಂಬಲಾಗಿದೆ. ಮೈಸೂರು ಕ್ರಿ.ಶ.೧೪೦೦ ರಿಂದ ಹಿಂದೂರಾಜರಾದ ಒಡೆಯರ್ ಮನೆತನದವರಿಗೆ ಪ್ರಮುಖ ನಗರವಾಗಿತ್ತು. ಕ್ರಿ.ಶ. ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯವು ಪತನಗೊಳ್ಳುವವರೆಗೆ ಒಡೆಯರ್ ಮನೆತನವು ಅವರ ಅಧೀ ರಾಜ್ಯವಾಗಿತ್ತು. ನಂತರ ತಮಗೆ ತಾವೇ ಸ್ವಾತಂತ್ರ್ಯ ಘೋಷಿಸಿಕೊಂಡರು. ೧೯೪೮ರಲ್ಲಿ ಮೈಸೂರು ರಾಜಸಂಸ್ಥಾನವು ಭಾರತ ಒಕ್ಕೂಟವನ್ನು ಸೇರುವುದರೊಂದಿಗೆ ಒಡೆಯರ್ ಮನೆತನದ ಆಳ್ವಿಕೆಯು ಅಧಿಕೃತವಾಗಿ ಕೊನೆಗೊಂಡಿತು. ೧೮ನೇ ಶತಮಾನದಲ್ಲಿ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯು ಮೈಸೂರು ಅರಸರ ಆಳ್ವಿಕೆಯನ್ನು ಕೆಲವು ಕಾಲ ಮೊಟಕುಗೊಳಿಸಿತ್ತು. ಆದರೆ ಟಿಪ್ಪುವನ್ನು ಸೋಲಿಸಿ ಬ್ರಿಟಿಷರು ಮೈಸೂರನ್ನು ಒಡೆಯರ್‌ಮನೆತನದ ರಾಜರಿಗೆ ಹಸ್ತಾಂತರಿಸಿದರು.
ಮೈಸೂರು ನಗರವು ಸಮುದ್ರಮಟ್ಟದಿಂದ ೭೭೦ಮೀಟರ್ ಎತ್ತರದಲ್ಲಿದೆ ಹಾಗೂ ೧೨ ೧೮ ಉತ್ತರ ಅಕ್ಷಾಂಶದಲ್ಲಿಯೂ ೭೬ ೧೨ ಪೂರ್ವ ರೇಖಾಂಶದಲ್ಲಿ ನೆಲೆಸಿದೆ. ಕಾವೇರಿ ಮತ್ತು ಕಬಿನಿ ನದಿಗಳಿಂದ ಸುತ್ತುವರಿದಿರುವ ಮೈಸೂರು ವರ್ಷವಿಡೀ ೧೮ ಮತ್ತು ೩೨ ಉಷ್ಣಾಂಶದ ನಡುವೆ ಅತ್ಯುತ್ತಮ ವಾತಾವರಣವನ್ನು ಹೊಂದಿದೆ. ಸಂಸ್ಕೃತಿ ಮತ್ತು ಪರಂಪರೆಯಿಂದ ಶ್ರೀಮಂತವಾಗಿರುವ ಮೈಸೂರು ನಗರವು ಶ್ರೀಗಂಧ, ರೇಷ್ಮೆ, ಅಮೂಲ್ಯ ಸಸ್ಯಸಂಪತ್ತು, ವೈವಿದ್ಯಮಯ ಪ್ರಾಣಿಸಂಕುಲ, ಕರಕುಶಲ ಕಲೆಗಳು, ಶಾಸ್ತ್ರೀಯ ಸಂಗೀತ, ಶಿಲ್ಪಕಲಾ ಅದ್ಭುತಗಳೊಂದಿಗೆ ಸರಸ್ವತಿಯ ಪುತ್ರರ ಹಾಗೂ ವೈವಿದ್ಯಮಯ ಸಂಶೋಧನೆಯ ಕೇಂದ್ರವೂ ಆಗಿದೆ. ಸುಗಂಧಯುಕ್ತ ಅಗರಬತ್ತಿಯಿಂದ ಆರಂಭಿಸಿ ರೇಷ್ಮೆ ಸೀರೆವರೆಗೂ ವೈಶಿಷ್ಟಪೂರ್ಣ ವಸ್ತುಗಳು ದೊರೆಯುವ ಮೈಸೂರು ಗ್ರಾಹಕರ (ಕೊಳ್ಳುವವರ) ಸ್ವರ್ಗವೂ ಆಗಿದೆ.
ಮೈಸೂರಿನ ವೈಶಿಷ್ಟತೆಗಳು
ಮೈಸೂರು ನಗರವು ಹಲವು ವೈಶಿಷ್ಟತೆಗಳಿಗೆ ಹೆಸರುವಾಸಿಯಾಗಿದೆ. ಮೈಸೂರ್ ಪಾಕ್, ಮೈಸೂರು ಪೇಟ, ಮೈಸೂರು ಬದನೆ (ಇರಂಗೇರಿ), ಮೈಸೂರು ಟಾಂಗ, ಅಷ್ಠಾಂಗ ಯೋಗ ಇತ್ಯಾದಿ. ಮೈಸೂರಿನ ಹಲವು ವೈಶಿಷ್ಟತೆಗಳಿಗ ಭೌಗೋಳಿಕ ಸಂಕೇತಗಳ (ಜಿಯಾಗ್ರಾಫಿಕಲ್ ಇಂಡಿಕೇರ್‍ಸ್) ಮನ್ನಣೆ ದೊರೆತಿವೆ. ಅವುಗಳೆಂದರೆ
ಮೈಸೂರು ರೇಷ್ಮೆ
ಮೈಸೂರು ಅಗರಬತ್ತಿ
ಮೈಸೂರು ವೀಳೆ ಎಲೆ
ಮೈಸೂರು ಶ್ರೀಗಂಧದ ಎಣ್ಣೆ
ಮೈಸೂರು ಸ್ಯಾಂಡಲ್ ಸೋಪ್
ಮೈಸೂರು ಬೀಟೆಮರದ ಇನ್‌ಲೇ ಕೆಲಸ
ಭಕ್ಷ್ಯ ಭೋಜನಗಳು:
ಸಸ್ಯಾಹಾರಿ ಭೋಜನದ ಆಯ್ಕೆಗಳು ಮೈಸೂರಿನಲ್ಲಿ ಸಾಕಷ್ಟಿದೆ. ಊಟದ ಮುಖ್ಯ ಭಾಗ ಅನ್ನ ಮತ್ತು ಬೇಳೆಕಾಳುಗಳಾಗಿವೆ. ಉತ್ತರಕರ್ನಾಟಕದ ಸಾಂಪ್ರದಾಯಿಕ ರುಚಿಯ ದಕ್ಷಿಣ ಕರ್ನಾಟಕದ ಭೋಜನ, ಹಾಗೂ ಮಸಾಲೆಯುಕ್ತ ಕರಾವಳಿ ತೀರದ ಭೋಜನ ಇವುಗಳಿಗಿಂತ ವಿಭಿನ್ನವಾದ ಕೊಡವ ಭೋಜನ ಹೀಗೆ ವೈವಿದ್ಯಮಯ ಆಹಾರ ಪದ್ದತಿ ಇಲ್ಲಿ ದೊರೆಯುತ್ತದೆ.
ಮೈಸೂರು ನಗರದ ಕೆಲವು ರೆಸ್ಟೊರೆಂಟ್‌ಗಳಲ್ಲಿ ಪೂರ್ಣವಾದ ಕೇರದ ರುಚಿಯ ಭೋಜನ, ಮಂಗಳೂರು ಅಥವಾ ಕರವಾಳಿಯ ವೈಶಿಷ್ವ್ಯ ಪೂರ್ಣ ಭೋಜನ ದೊರೆಯುತ್ತದೆ. ಮೈಸೂರಿನಲ್ಲಿ ಉಡುಪಿ ಭಾಗದ ಪೂರ್ಣ ಸಸ್ಯಾಹಾರದ ಭೋಜನ ಕೂಡ ದೊರೆಯುತ್ತದೆ. ಉಡುಪಿ ಭೋಜನದಲ್ಲಿ ಸಾಮಾನ್ಯವಾಗಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಟೊಮೊಟೋಗಳನ್ನು ಉಪಯೋಗಿಸುವುದಿಲ್ಲ. ರಸಂನೊಂದಿಗೆ ಅನ್ನ, ಹಲಸಿನ ಹಣ್ಣು, ಬಾಳೆಕಾಯಿ, ಮಾವಿನಕಾಯಿ ಉಪ್ಪಿನ ಕಾಯಿ, ಕೆಂಪು ಮೆಣಸಿನಕಾಯಿ ಉಡುಪಿಯ ಭೋಜನದ ಮುಖ್ಯ ಭಾಗಗಳಾಗಿರುತೆ. ಆಡ್ಯೆ, ಅಜದಿನಗಳು ಮತ್ತು ಚಟ್ನಿಗಳು ಈ ಊಟದ ವಿಶೇಷಗಳಾಗಿವೆ. ಊಟವನ್ನು ಬಾಳೆಎಲೆ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಲಾಗುತ್ತದೆ.
ಕರ್ನಾಟಕದ ಸಂಪ್ರದಾಯಿಕ ಅಡುಗೆಯಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬೇಳೆ ಕಾಳುಗಳು, ಸಣ್ಣಗೆ ಹೆಚ್ಚಿದ ತರಕಾರಿಯ ಸಲಾಡ್‌ಗಳು, ತೆಂಗಿನಕಾಯಿ, ಹಸಿಮೆಣಸಿನಕಾಯಿ, ಕರಿಬೇವು, ಸಾಸಿವೆ ಕಾಳುಗಳು, ಗೊಜ್ಜು (ಹುಣಿಸೆ ಹುಳಿಯಲ್ಲಿ ಮೆಣಸಿನ ಪುಡಿಯೊಂದಿಗೆ ತರಕಾರಿಯನ್ನು ಬೇಯಿಸುವುದು), ತೊವ್ವೆ (ಬೇಯಿಸಿದ ಬೇಳೆ---), ಹುಳಿ (ತರಕಾರಿಗಳನ್ನು ತೆಂಗಿನಕಾಯಿ ಮಸಾಲೆ, ಹುಣಿಸೆಹುಳಿ, ಮೆಣಿಸಿನಪುಡಿಯೊಂದಿಗೆ ಬೇಯಿಸಿರುವುದು) ಮತ್ತು ಹಪ್ಪಳ ಇವುಗಳನ್ನು ಬಳಸಲಾಗುತ್ತದೆ. ಅನ್ನದಲ್ಲೇ ವಿವಿಧ ಬಗೆಯ ಅಂದರೆ ನಿಂಬೆಹಣ್ಣಿನ ಚಿತ್ರಾನ್ನ (ಅನ್ನದೊಂದಿಗೆ ನಿಂಬೆಹಣ್ಣಿನ ರಸ, ಹಸಿಮೆಣಸಿನಕಾಯಿ, ಅರಿಶಿನಪುಡಿ ಮತ್ತು ಎಣ್ಣೆಯಲ್ಲಿ ಹುರಿದ ಕಡಲೆಕಾಯಿ ಬೀಜ, ಕರಿಬೇವಿನ ಎಲೆ), ವಾಂಗಿಬಾತ್ (ಮಸಾಲೆಯುಕ್ತ ಅನ್ನದೊಂದಿಗೆ ಬದನೆಕಾಯಿ) ಪುಳಿಯೋಗರೆ (ಮಸಾಲೆ, ಹುಣಿಸೆರಸ ಹಾಗೂ ಕಡಲೆಕಾಯಿ ಬೀಜದೊಂದಿಗ ಅನ್ನ ಕಲೆಸುವುದು)ಇವರು ಕರ್ನಾಟಕ ಸಾಂಪ್ರದಾಯಿಕ ಅಡುಗೆಯ ರುಚಿಕರ ಆಹಾರದ ಭಾಗವಾಗಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಇಷ್ಟಪಡುವ ಆಹಾರವೆಂದರೆ ಬಿಸಿಬೇಳೆಬಾತ್, ಅನ್ನ, ಬೇಳೆ, ಹುಣಿಸೆರಸ, ಮೆಣಿಸಿನಪುಡಿ, ಲವಂಗ ಇತ್ಯಾದಿಗಳನ್ನು ಒಳಗೊಂಡ ವಿಶಿಷ್ಟ ರೀತಿಯ ಭಕ್ಚ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಮಾಂಸದ ಸಾರು ಅಥವಾ ಸೊಪ್ಪಿನ ಸಾರಿನೊಂದಿಗೆ ರಾಗಿಮುದ್ದೆ (ರಾಗಿಯನ್ನು ಹಬೆಯಲ್ಲಿ ಬೇಯಿಸಿ ನೀರಿನೊಂದಿಗೆ ಬೆರೆಸಿ ದೊಡ್ಡ ಉಂಡೆಗಳಾಗಿ ಮಾಡುವುದು)ಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಗೋಧಿ ಮತ್ತು ಜೋಳದ ರೊಟ್ಟಿಗಳನ್ನು ಮನೆಯಲ್ಲಿ ಸಿದ್ಧಪಡಿಸಿ ಮಾರುವ ವ್ಯವಸ್ಥೆಯೂ ಇದೆ. ರೊಟ್ಟಿಗಳೊಂದಿಗೆ ಕಾಳು ಪಲ್ಯ, ಸೊಪ್ಪು ಪಲ್ಯ, ಉಸಲಿ ಇತ್ಯಾದಿಗಳನ್ನು (ಮೊಳಕೆ ಬರಿಸಿದ ಕಾಳುಗಳನ್ನು ಮಸಾಲೆಯೊಂದಿಗೆ ಬಳಸುವುದು) ಉಪಯೋಗಿಸಲಾಗುತ್ತದೆ.
ಬೆಳಗಿನ ತಿಂಡಿಗೆ, ಉಪ್ಪಿಟ್ಟು (ಹುರಿದ ರವೆಯೊಂದಿಗೆ ಮೆಣಿಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಸಾಸುವೆ ಹಾಗೂ ಜೀರಿಗೆಯೊಂದಿಗೆ ಸೇರಿಸುವುದು) ಇಡ್ಲಿ ( ಅಕ್ಕಿಯನ್ನು ನೀರಿನಲ್ಲಿ ನೆನಸಿ ರುಬ್ಬಿ ಹಬೆಯಲ್ಲಿ ಬೇಯಿಸುವುದು) ಸಾಂಬಾರ್ (ತರಕಾರಿ ಮತ್ತು ಮಸಾಲೆಯೊಂದಿಗೆ) ತಟ್ಟೆ ಇಡ್ಲಿ, ದೋಸೆ, ಸಾದಾ ಅಥವಾ ಮಸಾಲೆ (ಬೇಯಿಸಿದ ಆಲೂಗೆಡ್ಡೆಯೊಂದಿಗೆ ಸೇರಿಸಿ ಬಡಿಸುವುದು)ರವೆ ದೋಸೆ, ಸೆಟ್ ದೋಸೆ, ವಡೆ, ಪೂರಿ ಪಲ್ಯ ಉತ್ತಪ್ಪ ಅಥವಾ ಕೇಸರಿ ಬಾತ್ (ರವೆ, ಸಕ್ಕರೆ ಮತ್ತು ಕೇಸರಿಯೊಂದಿಗೆ ಮಾಡುವ ಅಡುಗೆ) ಇವುಗಳಲ್ಲಿ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.
ಮೈಸೂರಿನಲ್ಲಿ ಮೈಸೂರ್ ಪಾಕ್ ಚಿರೋಟಿ, (ಹಗುರವಾದ ಗರಿಗರಿಯಾದ ಪೇಸ್ತ್ರಿ ಯೊಂದಿಗೆ ಪುಡಿಮಾಡಿದ ಸಕ್ಕರೆ ಮತ್ತು ಬಾದಾಮಿ ಹಾಲಿನೊಂದಿಗೆ ತಿನ್ನವುದು) ಒಬ್ಬಟ್ಟು ಅಥವಾ ಹೋಳಿಗೆ (ತೆಳುವಾದ ಚಪಾತಿ ಮಾದರಿಯ ತಿಂಡಿಯ ಮೇಲೆ ಬೆಲ್ಲ ಅಥವಾ ಸಕ್ಕರೆ, ತೆಂಗಿನಕಾಯಿ ಬೆರೆಸಿ ಹೆಂಚಿನ ಮೇಲೆ ಸ್ವಲ್ಪವೆ ಬೇಯಿಸುವುದು. ಧಾರವಾಡ ಪೇಡ, ಗೋಕಾಕ್ ಕರದಂಟು ಮತ್ತು ಶಾವಿಗೆ ಪಾಯಸ (ಹಾಲು, ಶಾವಿಗೆ, ಸಕ್ಕರೆ ಮತ್ತು ಗೋಡಂಬಿ) ಇವುಗಳ ಬಳಕೆ ಇದೆ. ಸ್ಥಳೀಯ ಬೋಜನವಲ್ಲದೆ ಮೈಸೂರಿನ ರೆಸ್ಟೋರೆಂಟ್‌ಗಳಲ್ಲಿ ಉತ್ತರ ಕರ್ನಾಟಕ, ಆಂಧ್ರ, ಪಂಜಾಬ್, ಗುಜರಾತಿ ಭೋಜನಗಳಲ್ಲದೆ ಚೈನಾ ಹಾಗೂ ಕಾಂಟನೆಂಟಲ್ ತಿನಿಸುಗಳೂ ಲಭ್ಯವಿದೆ.
ಯೋಗ:
ವಿಶ್ವಪ್ರಸಿದ್ಧ ಅಷ್ಟಾಂಗಯೋಗ ಗುರು ದಿವಂಗತ ಶ್ರೀ ಪಟ್ಟಾಭಿ ಜೋಯಿಸ್, ಮೈಸೂರಿನವರು, ಈಗ ಈ ನಗರವನ್ನು ಅಷ್ಠಂಗ ಯೋಗ ನಗರವೆಂದೂ ಕರೆಯಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡಲು ಮೈಸೂರು ಪ್ರಸಿದ್ಧವಾಗಿದ್ದು ವಿದೇಶಿಯರನ್ನು ಕೈಬೀಸಿಕರೆಯುತ್ತದೆ.
ಮೈಸೂರು ಶೈಲಿಯ ಅಷ್ಟಾಂಗ ಯೋಗ ಎಂದರೇನು?
ಮೊದಲಬಾರಿಗೆ ಅಷ್ಠಂಗಯೋಗ ತರಗತಿಗೆ ಪ್ರವೇಶಿಸಿದಾಗ ಗೊಂದಲವುಂಟಾಗುತ್ತದೆ. ಒಬ್ಬ ವಿದ್ಯಾರ್ಥಿ ಒಂದು ಮೂಲೆಯಲ್ಲಿ ತಲೆಕೆಳಗಾಗಿ ನಿಂತಿದ್ದರೆ, ಮತ್ತೊಬ್ಬ ತ್ರಿಭುಜಾಕೃತಿಯಲ್ಲಿ ನಿಂತಿರುತ್ತಾನೆ, ಮತ್ತೊಬ್ಬಾಕೆ ತನ್ನ ಕೈಗಳ ಮೇಲೆ ನಿಲ್ಲಲು ಹೋರಾಟ ನಡೆಸಿರುತ್ತಾಳೆ. ಇಲ್ಲಿ ಏನಾಗುತ್ತಿದೆ? ಎಂಬುದನ್ನು ಸ್ವಲ್ಪ ಹೊತ್ತು ಅಲ್ಲೇ ಇದ್ದು ಗಮನಿಸಿದರೆ ಒಂದು ಪೂರ್ವ ನಿರ್ಧಾರಿತ ಯೋಜನೆ ಕಂಡುಬರುತ್ತದೆ. ಪ್ರತಿಯೊಬ್ಬರೂ ಪೂರ್ವನಿರ್ಧಾರಿತ ರೀತಿಯಲ್ಲಿ, ಸ್ಪಷ್ಟವಾದ ರೀತಿಯಲ್ಲಿ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೇರೆ ಯೋಗ ತರಗತಿಗಳಿಗೆ ಹೋಲಿಸಿದರೆ ಮೌನವೇ ಪ್ರಧಾನ. ಕೆಲವೊಮ್ಮೆ ಅಪರೂಪವಾಗಿ ಗುರುಗಳು ತಮ್ಮ ಶಿಷ್ಯರಿಗೆ ಪಿಸುಗುಡುವ ರೀತಿಯಲ್ಲಿ ನಿರ್ದೇಶನ ನೀಡುತ್ತಿರುತ್ತಾರೆ. ಇದಕ್ಕಿಂತ ಹೆಚ್ಚಿನದಾಗಿ ಕೇಳುವ ಶಬ್ದವೆಂದರೆ ಸಾಮೂಹಿಕ ಉಸಿರಾಟದ ಶಬ್ದ ಮಾತ್ರ. ಗುರುಗಳು ಒಬ್ಬರಿಂದ ಒಬ್ಬರು ಶಿಷ್ಯರ ಬಳಿಗೆ ನಿಶ್ಯಬ್ದವಾಗಿ ತೆರಳಿ ಸೂಚನೆಗಳನ್ನು ನೀಡುತ್ತಿರುತ್ತಾರೆ. ಮೈಸೂರಿನ ಈ ಸಾಂಪ್ರದಾಯಿಕ ಯೋಗ ಮಾದರಿಯಲ್ಲಿ ವಿದ್ಯಾರ್ಥಿಗಳು ನಿಶ್ಚಿತ ರೀತಿಯಲ್ಲಿ ದೇಹದ ಅಂಗಾಂಗಳ ಚಲನೆ ಹಾಗೂ ಉಸಿರಾಟದ ನಿಯಂತ್ರಣ (ವಿನ್ಯಾಸ) ಕಲಿಯುತ್ತಾರೆ. ಯೋಗಾಭ್ಯಾಸ ಹಾಗೂ ವಿನ್ಯಾಸ ಪರಸ್ಪರ ಸಂಬಂಧ ಹೊಂದಿದ್ದು ಆ ಮೂಲಕ ಉಸಿರಾಟದ ನಿಯಂತ್ರಣ ಸಾದಿಸಲಾಗುತ್ತಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಶ್ರೀ ಎನ್.ಜಯರಾಂ,
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮೈಸೂರು
ದೂ: +೯೧ ೮೨೧ ೨೪೨೧೮೩೩ / ೨೪೨೨೦೯೬
ಫ್ಯಾಕ್ಸ್: +೯೧ ೮೨೧ ೨೪೨೧೮೬೬
ಮೊಬೈಲ್:+೯೧ ೯೮೪೪೭ ೭೭೦೨೯
No comments:
Post a Comment